ಪ್ರಣಾಳಿಕೆ
- ಮುಖಪುಟ
- /
- Manifesto

ಪೀಠಿಕೆ
ರಾಜಕೀಯ ಪಕ್ಷದ ಪ್ರಣಾಳಿಕೆಯು ಸಾಮಾನ್ಯವಾಗಿ ನಾಗರಿಕರಿಗೆ ಭರವಸೆಗಳನ್ನು ತೇಲಿಬಿಡುವ ಸಾಧನವಾಗಿದೆ. (ವಿರಳವಾಗಿ ಸರಿಯಾದ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಆಧರಿಸಿರುತ್ತದೆ). ಒಂದು ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯನ್ನು ಬೇಗನೆ ಮರೆತುಬಿಡುತ್ತದೆ.
ಬೆಂಗಳೂರು ನವನಿರ್ಮಾಣ ಪಕ್ಷ ತನ್ನ ಪ್ರಣಾಳಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ವಿವರವಾದ ಸಂಶೋಧನೆ ಮತ್ತು ವಿಶ್ಲೇಷಣೆಯ ಮೂಲಕ ಬೆಂಗಳೂರು ನಗರ ಮತ್ತು ಅದರ ನಾಗರಿಕರಿಗೆ ನಿಜವಾಗಿಯೂ ಏನು ಅಗತ್ಯವಿದೆ ಎಂಬುದನ್ನು ಕಂಡುಕೊಳ್ಳುತ್ತೆದೆ. ಅದರ ಆಧಾರದ ಮೇಲೆ ತನ್ನ ಪ್ರಣಾಳಿಕೆಯನ್ನು ನಿರಂತರವಾಗಿ ವಿಕಸನಕ್ಕೆ ಒಳಪಡಿಸುತ್ತಾ ಒಂದು ಪ್ರಬಲ ಕ್ರಿಯಾ ಯೋಜನೆಯನ್ನು ತಯಾರಿಸುತ್ತದೆ.
ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸ್ವಾಗತಿಸುತ್ತೇವೆ!
ಬೆನಪ ಬೆಂಗಳೂರಿನ ಜನರ ಪಕ್ಷವಾಗಿದ್ದು, ಬೆಂಗಳೂರಿನ ನಾಗರಿಕರಾದ ನಿಮ್ಮ ಹಾಗೂ ಬೆನಪ ದ ನಡುವೆ ನಿರಂತರ ಸಂವಹನದ ಅವಶ್ಯಕತೆ ಇದೆ ಎಂದು ನಾವು ಧೃಢವಾಗಿ ನಂಬಿದ್ದೇವೆ!
ನಿಮ್ಮ ವಾರ್ಡ್ ಅಥವಾ ಬೆಂಗಳೂರಿಗೆ ಸೂಕ್ತವೆಂದು ಭಾವಿಸುವ ಪ್ರಣಾಳಿಕೆಯನ್ನು ನಿರ್ಮಿಸಲು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಈ ಸಂವಹನದಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ದಯವಿಟ್ಟು ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಸಲಹೆಗಳನ್ನು ನಮಗೆ ತಿಳಿಸಿ. ನಿಮ್ಮ ಸಹಕಾರವೇ ಸರ್ವಸ್ವ.