ನಿಮ್ಮ ಮತ ಬೆಂಗಳೂರಿಗೆ

ನಿಮ್ಮ ಮತ ಕೇವಲ ಒಂದು ಮತವಲ್ಲ. ಅದು ನಿಮ್ಮ ಧ್ವನಿ!

ಬಿಬಿಎಂಪಿ ಯ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಚುನಾವಣೆಗಳಲ್ಲಿ ನಿಮ್ಮ ಮತದಾನ ಅತ್ಯಗತ್ಯ. ಚುನಾವಣೆ ನಮ್ಮ ನಗರ ಅಮೂಲಾಗ್ರ ಅಭಿವೃದ್ಧಿ ಹೊಂದುವಲ್ಲಿ ಮೊದಲ ಹೆಜ್ಜೆಯಾಗಿದೆ. ನೀವು ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಮತ ಚಲಾಯಿಲು ನಿಮ್ಮ ‘ವೋಟರ್ ಐಡಿಯನ್ನು’ ಸಿದ್ಧವಾಗಿರಿಸಿ.

ನಿಮ್ಮಲ್ಲಿ ‘ವೋಟರ್ ಐಡಿ’ ಇಲ್ಲವೇ? ನಿಮ್ಮ ‘ವೋಟರ್ ಐಡಿ’ಯನ್ನು ಪರಿಷ್ಕರಿಸಬೇಕೆ?
ಆನ್ ಲೈನಿನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿರಿ ಫಾರ್ ಆ ಸ್ಟೆಪ್-ಬೈ-ಸ್ಟೆಪ್ ಗೈಡ್ ಟು ದಿ ಆನ್ಲೈನ್ ಅಪ್ಲಿಕೇಶನ್

 

ಬಿಬಿಎಂಪಿ ಯ ಬಗ್ಗೆ

ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)

ಬೆಂಗಳೂರು ನಗರದ ಮಹಾನಗರ ಪಾಲಿಕೆ. ಇಂತಹ ಸಂಸ್ಥೆಗಳನ್ನು ಭಾರತದ ಸಂವಿಧಾನದಲ್ಲಿ LUB, local urban body ಅಥವಾ ಸ್ಥಳೀಯ ನಗರ ಸಂಸ್ಥೆ ಎಂದು ವ್ಯಾಖ್ಯಾನಿಸಲಾಗಿದ್ದು ಬಿಬಿಎಂಪಿ ನಮ್ಮ ನಗರದ ನಿರ್ವಹಣೆ ಮಾಡುತ್ತಿರುವ ಆಡಳಿತಾತ್ಮಕ ಸಂಸ್ಥೆಯಾಗಿದೆ. ಒಂದು ನಗರಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ರಸ್ತೆಗಳು, ಕಾಲುದಾರಿಗಳು, ಚರಂಡಿಗಳು, ಉದ್ಯಾನವನಗಳು ಮುಂತಾದ ನಾಗರಿಕರ ಸೌಕರ್ಯಗಳ ನಿರ್ವಹಣೆ ಮತ್ತು ಸುಧಾರಣೆ ಬಿಬಿಎಂಪಿಯ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿವೆ.

‘ಬಿಬಿಎಂಪಿ ಕೌನ್ಸಿಲ್’ ಎಂದು ಕರೆಯಲಾಗುವ ಚುನಾಯಿತ ಪ್ರತಿನಿಧಿಗಳ ಒಂದು ಮಂಡಳಿಯು ಬಿಬಿಎಂಪಿಯನ್ನು ನಡೆಸುತ್ತದೆ.

ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಬಿಬಿಎಂಪಿ ಚುನಾವಣೆಯಲ್ಲಿ ಎಲ್ಲಾ 198 ಬಿಬಿಎಂಪಿ ವಾರ್ಡ್‌ಗಳಿಂದ (ಬೆಂಗಳೂರು ನಗರದ ಪರಿಣಾಮಕಾರಿ ಆಡಳಿತದ ಉದ್ದೇಶಕ್ಕಾಗಿ ನಗರವನ್ನು ವಿಭಜಿಸಲಾಗಿರುವ ಸಣ್ಣ ಘಟಕಗಳು) 'ಕಾರ್ಪೊರೇಟರ್' ಒಬ್ಬರನ್ನು ಆಯ್ಕೆಮಾಡಲಾಗುತ್ತದೆ. ಕಾರ್ಪೊರೇಟರ್ ಅಭ್ಯರ್ಥಿಗಳು ಸಾಮಾನ್ಯವಾಗಿ ರಾಜ್ಯ ಅಥವಾ ರಾಷ್ಟ್ರೀಯ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರುತ್ತಾರೆ.

ಬೆಂಗಳೂರು ನಗರದ ಆಡಳಿತವನ್ನು ನಿರ್ವಹಿಸುವ ಬಿಬಿಎಂಪಿ ಕೌನ್ಸಿಲ್ ಈ 198 ಚುನಾಯಿತ ಕಾರ್ಪೊರೇಟರ್‌ಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ

ಬಿಬಿಎಂಪಿ ಚುನಾವಣೆಯ ಪ್ರಾಮುಖ್ಯತೆ ಏನು?

BBMP Elections

ವೋಟಿಂಗ್ ಇಸ್ ಇಂಪಾರ್ಟೆಂಟ್ ಇದು ಕೇವಲ ಮತವಲ್ಲ

Why your Vote counts?

Want to know by how many votes your corporator won by?