ಬೆನಪದ ಅಗತ್ಯತೆ ಬೆನಪ

  1. ಮುಖಪುಟ
  2. /
  3. Why the need...

ಬೆಂಗಳೂರು ನಗರವನ್ನು ಕಾಡುವ ಕೆಲವು ಸಮಸ್ಯೆಗಳು:

ಬೆನಪ ಮಾಹಿತಿ ಆಧಾರಿತ ಪರಿಹಾರಗಳನ್ನು ಒದಗಿಸಬಲ್ಲದು

ಬೆಂಗಳೂರು ನಗರವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿಯೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ನಮ್ಮ ನಗರವು ಇಲ್ಲಿನ ಮೂಲ ನಿವಾಸಿಗಳಿಗೆ ಹಾಗು ಭಾರತದ ವಿವಿಧ ಭಾಗಗಳಿಂದ ಬಂದು ನೆಲೆಸಿರುವ ವಲಸಿಗರಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ, ಸಾವಿರಾರು ಉದ್ಯೋಗಾವಕಾಶಗಳನ್ನು, ಸ್ಟಾರ್ಟ್-ಅಪ್ ಕಂಪನಿಗಳಿಗೆ ವ್ಯಾಪಾರ ಸ್ನೇಹಿ ವಾತಾವರಣವನ್ನು ನೀಡುತ್ತಿದ್ದು ಬಹು ಸಾಂಸ್ಕೃತಿಕ ಚಟುವಟಿಕೆಗಳನ್ನು, ಶ್ರೀಮಂತ ಇತಿಹಾಸ ಹಾಗು ಸಂಸ್ಕೃತಿಯನ್ನು ಹೊಂದಿದೆ. ಅದಲ್ಲದೇ ನಮ್ಮ ನಗರ ಜಗತ್ತಿನಾದ್ಯಂತ ಉತ್ತಮ ವಾತಾವರಣ, ಹಸಿರು ಪ್ರಕೃತಿ ಹಾಗು ಕೆರೆಗಳಿಗೆ ಹೆಸರನ್ನು ಪಡೆದಿದೆ.

ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರು ನಗರವು ಕಳೆದ ನಾಲ್ಕು ದಶಕಗಳಿಂದ ಅಸಾಧಾರಣ ಬೆಳವಣಿಗೆಯನ್ನು ಕಂಡಿದೆ.

ಹೀಗಿದ್ದರೂ ಆಡಳಿತ ವ್ಯವಸ್ಥೆಯು ನಗರದ ತ್ವರಿತ ಬೆಳವಣಿಗೆಗೆ ಹೊಂದಿಕೊಳ್ಳುವಲ್ಲಿ ಅಸಫಲವಾಗಿದೆ. ದೋಷಪೂರಿತ ನಗರ ಯೋಜನೆ, ದೂರದೃಷ್ಟಿ ಹಾಗು ಸ್ಪಷ್ಟ ಚಿತ್ರಣವಿಲ್ಲದೇ ಇರುವುದು, ಅದಕ್ಷ ಆಡಳಿತ, ಅಸಮಾನವಾಗಿ ನಿಧಿ ಹಂಚಿಕೆ ಮಾಡುವುದು ಹಾಗು ಸೂಕ್ತ ರೀತಿಯಲ್ಲಿ ಸಂಪನ್ಮೂಲಗಳ ಬಳಕೆ ಮಾಡದೇ ಇರುವುದು ಇದಕ್ಕೆ ಮೂಲ ಕಾರಣ.

ಇದು ಯೋಜನಾ ರಹಿತವಾಗಿ ಹಾಗು ಅವೈಜ್ಞಾನಿಕವಾದ ನಗರದ ಬೆಳವಣಿಗೆಗೆ ಕಾರಣವಾಗಿದ್ದು ಇವು ಅನೇಕ ಸಮಸ್ಯೆಗಳು ನಗರವನ್ನು ಕಾಡುವಂತೆ ಮಾಡಿವೆ.

ನಿಮ್ಮ ಅಭಿಪ್ರಾಯ/ಸಲಹೆಗಳು