ಬೆನಪದ ಅಗತ್ಯತೆ ಬೆನಪ

  1. ಮುಖಪುಟ
  2. /
  3. Why the need...

ಕಾರ್ಪೋರೇಟರ್ ಗಳ ತಂಡಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ

ಪಾರದರ್ಶಕತೆ, ಉತ್ತರದಾಯಿತ್ವ ಹಾಗು ಇಚ್ಛಾಶಕ್ತಿಯನ್ನು ಕಳೆದುಕೊಂಡಿರುವ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗು ಅದರ 198 ಕಾರ್ಪೊರೇಟರ್ ಗಳು ಸಾಧಾರಣವಾಗಿ ನಗರದ ಹಾಗು ನಾಗರಿಕರ ಬೇಕು ಬೇಡಗಳಿಗೆ ಸ್ಪಂದಿಸುವುದಿಲ್ಲ.

ರಾಜ್ಯ ಹಾಗು ರಾಷ್ಟ್ರದ ವಿಭಿನ್ನ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಈ ಕಾರ್ಪೋರೇಟರ್ ಗಳು ಪ್ರತೀ ವರ್ಷವೂ ಭರಪೂರವಾಗಿ ಆಶ್ವಾಸನೆಯನ್ನು ನೀಡುತ್ತಾರೆಯೇ ಹೊರತು ಆಶ್ವಾಸನೆಗಳನ್ನು ಪೂರೈಸುವುದಿಲ್ಲ. ಅವರಲ್ಲಿ ಅನೇಕರು ಉನ್ನತ ಶಿಕ್ಷಣವನ್ನು ಪಡೆಯದೇ ಇದ್ದು ಅವರಲ್ಲಿ ಅನುಭವ, ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಜ್ಞಾನ, ಜಾಣ್ಮೆ ಹಾಗು ವಿವೇಕದ ಕೊರತೆ ಕಂಡುಬರುತ್ತಿದ. ಇದರಿಂದಾಗಿ ಕೋಟ್ಯಾಂತರ ಜನರು ಪಾವತಿಸುತ್ತಿರುವ ತೆರಿಗೆ ಸೂಕ್ತವಾಗಿ ಖರ್ಚಾಗದೇ ಅಪ್ರಾಮಾಣಿಕ ಉದ್ದೇಶಗಳಿಗೆ ಬಳಕೆಯಾಗುತ್ತಿದೆ.

ಬೆನಪ ತಂಡವು ಪ್ರತೀ ವಾರ್ಡಿನಲ್ಲೂ ಕಾರ್ಪೋರೇಟರುಗಳ ಒಂದು ತಂಡವನ್ನು ಸಂಘಟಿಸಿದೆ. ಈ ತಂಡಗಳಿಂದ ಯೋಗ್ಯ ಹಾಗು ಪ್ರಾಮಾಣಿಕ ಕಾರ್ಪೋರೇಟರ್ ಗಳನ್ನು ಬಿಬಿಎಂಪಿ ಚುಣಾವಣೆಯಲ್ಲಿ ಭಾಗಿಯಾಗಲು ಆಯ್ಕೆ ಮಾಡಲಾಗುವುದು. ಇದು ಪ್ರತೀ ವಾರ್ಡಿನಲ್ಲೂ ನಾಗರಿಕರ ಬೇಕು ಬೇಡಗಳನ್ನು ಗಮನಿಸಿ ಕೆಲಸ ಮಾಡುವ ಕಾರ್ಪೋರೇಟರ್ ಗಳ ಒಂದು ಬಿಬಿಎಂಪಿ ಮಂಡಳಿಯನ್ನು ಖಚಿತಪಡಿಸುತ್ತದೆ.

ಬೆಂಗಳೂರಿನ ಆಡಳಿತದಲ್ಲಿ ಕಾರ್ಪೊರೇಟರ್ ಗಳ ಪಾತ್ರದ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಒತ್ತಿರಿ .

 

ನಿಮ್ಮ ಅಭಿಪ್ರಾಯ/ಸಲಹೆಗಳು