ಬೆನಪದ ಅಗತ್ಯತೆ ಬೆನಪ
- ಮುಖಪುಟ
- /
- Why the need...
ಕಾರ್ಪೋರೇಟರ್ ಗಳ ತಂಡಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ
- ಬೆಂಗಳೂರಿನ ಪ್ರತೀ ವಾರ್ಡಿನಲ್ಲಿಯೂ ಕಾರ್ಪೊರೇಟರ್ ಗಳ ತಂಡವನ್ನು ಸಂಘಟಿಸಲಾಗಿದೆ.
- ಈ ತಂಡಗಳು ಆಡಳಿತದಲ್ಲಿ ತಮ್ಮ ಧ್ವನಿ ಹೊಂದಲು ಬಯಸುವ ವಾರ್ಡ್ ನ ಸಕ್ರಿಯ ನಾಗರಿಕರನ್ನು ಒಳಗೊಂಡಿವೆ.
- ಈ ತಂಡಗಳು ವಾರ್ಡ್ ನೊಳಗಿನ ನಾಗರಿಕರ ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪರಿಹರಿಸಲು ಬಿಬಿಎಂಪಿಯೊಂದಿಗೆ ಒಡಗೂಡಿ ಕೆಲಸ ಮಾಡುತ್ತವೆ
- ಆ ತಂಡಗಳಿಂದ ಬಿಬಿಎಂಪಿ ಚುನಾವಣೆಯನ್ನು ಎದುರಿಸಲಿರುವ ಕಾರ್ಪೊರೇಟರ್ ಅಭ್ಯರ್ಥಿಗಳನ್ನು ಒಮ್ಮತದ ಮೂಲಕ ಆಯ್ಕೆ ಮಾಡಲಾಗುತ್ತದೆ
- ಬೆನಪ ಒಂದು ವಾರ್ಡ್ ಅನ್ನು ಗೆದ್ದ ನಂತರ ಅಲ್ಲಿನ ಕಾರ್ಪೋರೇಟರ್ ಗಳ ತಂಡವು ವಾರ್ಡ್ ಸಮಿತಿಯನ್ನು ರಚಿಸುತ್ತದೆ.
ಪಾರದರ್ಶಕತೆ, ಉತ್ತರದಾಯಿತ್ವ ಹಾಗು ಇಚ್ಛಾಶಕ್ತಿಯನ್ನು ಕಳೆದುಕೊಂಡಿರುವ ಬಿಬಿಎಂಪಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗು ಅದರ 198 ಕಾರ್ಪೊರೇಟರ್ ಗಳು ಸಾಧಾರಣವಾಗಿ ನಗರದ ಹಾಗು ನಾಗರಿಕರ ಬೇಕು ಬೇಡಗಳಿಗೆ ಸ್ಪಂದಿಸುವುದಿಲ್ಲ.
ರಾಜ್ಯ ಹಾಗು ರಾಷ್ಟ್ರದ ವಿಭಿನ್ನ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಈ ಕಾರ್ಪೋರೇಟರ್ ಗಳು ಪ್ರತೀ ವರ್ಷವೂ ಭರಪೂರವಾಗಿ ಆಶ್ವಾಸನೆಯನ್ನು ನೀಡುತ್ತಾರೆಯೇ ಹೊರತು ಆಶ್ವಾಸನೆಗಳನ್ನು ಪೂರೈಸುವುದಿಲ್ಲ. ಅವರಲ್ಲಿ ಅನೇಕರು ಉನ್ನತ ಶಿಕ್ಷಣವನ್ನು ಪಡೆಯದೇ ಇದ್ದು ಅವರಲ್ಲಿ ಅನುಭವ, ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಜ್ಞಾನ, ಜಾಣ್ಮೆ ಹಾಗು ವಿವೇಕದ ಕೊರತೆ ಕಂಡುಬರುತ್ತಿದ. ಇದರಿಂದಾಗಿ ಕೋಟ್ಯಾಂತರ ಜನರು ಪಾವತಿಸುತ್ತಿರುವ ತೆರಿಗೆ ಸೂಕ್ತವಾಗಿ ಖರ್ಚಾಗದೇ ಅಪ್ರಾಮಾಣಿಕ ಉದ್ದೇಶಗಳಿಗೆ ಬಳಕೆಯಾಗುತ್ತಿದೆ.
ಬೆನಪ ತಂಡವು ಪ್ರತೀ ವಾರ್ಡಿನಲ್ಲೂ ಕಾರ್ಪೋರೇಟರುಗಳ ಒಂದು ತಂಡವನ್ನು ಸಂಘಟಿಸಿದೆ. ಈ ತಂಡಗಳಿಂದ ಯೋಗ್ಯ ಹಾಗು ಪ್ರಾಮಾಣಿಕ ಕಾರ್ಪೋರೇಟರ್ ಗಳನ್ನು ಬಿಬಿಎಂಪಿ ಚುಣಾವಣೆಯಲ್ಲಿ ಭಾಗಿಯಾಗಲು ಆಯ್ಕೆ ಮಾಡಲಾಗುವುದು. ಇದು ಪ್ರತೀ ವಾರ್ಡಿನಲ್ಲೂ ನಾಗರಿಕರ ಬೇಕು ಬೇಡಗಳನ್ನು ಗಮನಿಸಿ ಕೆಲಸ ಮಾಡುವ ಕಾರ್ಪೋರೇಟರ್ ಗಳ ಒಂದು ಬಿಬಿಎಂಪಿ ಮಂಡಳಿಯನ್ನು ಖಚಿತಪಡಿಸುತ್ತದೆ.
ಬೆಂಗಳೂರಿನ ಆಡಳಿತದಲ್ಲಿ ಕಾರ್ಪೊರೇಟರ್ ಗಳ ಪಾತ್ರದ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಒತ್ತಿರಿ .