ಪ್ರಣಾಳಿಕೆ

  1. ಮುಖಪುಟ
  2. /
  3. ಪ್ರಣಾಳಿಕೆ

ಬೆನಪದ ವಿಶಿಷ್ಟ 25-ಅಂಶಗಳ ವಾರ್ಡ್ ಪ್ರಣಾಳಿಕೆ

ಬೆಂಗಳೂರು ನವನಿರ್ಮಾಣ ಪಕ್ಷ (ಬೆನಪ) 25-ಅಂಶಗಳ ವಾರ್ಡ್ ಪ್ರಣಾಳಿಕೆಯನ್ನು ಜಾರಿಗೆ ತರುವ ಮೂಲಕ ನಾಗರಿಕ ಭಾಗವಹಿಸುವಿಕೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ಮೂಲಕ ವಾರ್ಡ್ ಮಟ್ಟದಲ್ಲಿ ಉತ್ತಮ ತಳಮಟ್ಟದ ಆಡಳಿತವನ್ನು ನೀಡುವ ಭರವಸೆ ನೀಡುತ್ತದೆ. ಇಲ್ಲಿ ಓದಿ

ಪೀಠಿಕೆ

ರಾಜಕೀಯ ಪಕ್ಷದ ಪ್ರಣಾಳಿಕೆಯು ಸಾಮಾನ್ಯವಾಗಿ ನಾಗರಿಕರಿಗೆ ಭರವಸೆಗಳನ್ನು ತೇಲಿಬಿಡುವ ಸಾಧನವಾಗಿದೆ. ( ಅವುಗಳ ಹಿಂದೆ ಸೂಕ್ತವಾದ ಸಂಶೋಧನೆ ಅಥವಾ ವಿಶ್ಲೇಷಣೆ ಇರುವುದಿಲ್ಲ). ಒಂದು ಪಕ್ಷ ಅಧಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯನ್ನು ಬೇಗನೆ ಮರೆತುಬಿಡುತ್ತದೆ.

ಆದರೆ ಬೆಂಗಳೂರಿನ ನವನಿರ್ಮಾಣ ಪಕ್ಷ ತನ್ನ ಘೋಷಣೆಯನ್ನು ಬಹು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಇದು ಕೇವಲ ಚುನಾವಣಾ ಮಾತುಗಳಲ್ಲ, ಬದಲಾಗಿ ಬೆಂಗಳೂರು ನಗರಕ್ಕೂ, ಅದರ ನಾಗರಿಕರಿಗೂ ವಾಸ್ತವವಾಗಿ ಅಗತ್ಯವಿರುವ ವಿಚಾರಗಳ ಬಗ್ಗೆ ನೆಲದಮಟ್ಟದಲ್ಲಿ ಸಂಶೋಧನೆ ಮತ್ತು ವಿಶ್ಲೇಷಣೆಮೂಲಕ ರೂಪಿಸುವ ನಿರಂತರವಾಗಿ ಅಭಿವೃದ್ಧಿಗೊಳ್ಳುವ ಕ್ರಿಯಾತ್ಮಕ ಯೋಜನೆಯಾಗಿದೆ.

ಪ್ರಣಾಳಿಕೆಯ ಒಟ್ಟಾರೆ ಚಿತ್ರಣ

ಬೆನಪ ದ ಪ್ರಣಾಳಿಕೆಯ ಸಮಗ್ರ ಮತ್ತು ಆಳವಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸ್ವಾಗತಿಸುತ್ತೇವೆ!

ಬೆನಪ ಬೆಂಗಳೂರಿನ ಜನರ ಪಕ್ಷವಾಗಿದ್ದು, ಬೆಂಗಳೂರಿನ ನಾಗರಿಕರಾದ ನಿಮ್ಮ ಹಾಗೂ ಬೆನಪ ದ ನಡುವೆ ನಿರಂತರ ಸಂವಹನದ ಅವಶ್ಯಕತೆ ಇದೆ ಎಂದು ನಾವು ಧೃಢವಾಗಿ ನಂಬಿದ್ದೇವೆ!

ನಿಮ್ಮ ವಾರ್ಡ್ ಅಥವಾ ಬೆಂಗಳೂರಿಗೆ ಸೂಕ್ತವೆಂದು ಭಾವಿಸುವ ಪ್ರಣಾಳಿಕೆಯನ್ನು ನಿರ್ಮಿಸಲು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಈ ಸಂವಹನದಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ದಯವಿಟ್ಟು ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಸಲಹೆಗಳನ್ನು ನಮಗೆ ತಿಳಿಸಿ. ನಿಮ್ಮ ಸಹಕಾರವೇ ಸರ್ವಸ್ವ.

 

ನಿಮ್ಮ ಅಭಿಪ್ರಾಯ/ಸಲಹೆಗಳು