Manifesto
ಸಾರ್ವಜನಿಕ ಶೌಚಾಲಯಗಳು
19-10-2025ಮಧ್ಯಮದಿಂದ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸ್ವಚ್ಛ ಮತ್ತು ಆಧುನಿಕ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ/ನವೀಕರಣ.
ಬೀದಿ ವ್ಯಾಪಾರಿಗಳು
19-10-2025ಬೀದಿ ವ್ಯಾಪಾರಿಗಳಿಗೆ ಸೂಕ್ತ ಪರವಾನಗಿ ನೀಡುವುದು, ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ನಿರ್ದಿಷ್ಟ ವಲಯಗಳ ನಿಯೋಜನೆ.
ಬೋರ್ವೆಲ್ ಮತ್ತು ಮಳೆಯ ನೀರು ಸಂಗ್ರಹಣೆ
19-10-2025ಅಕ್ರಮ ಬೋರ್ವೆಲ್ಗಳ ನಿಯಂತ್ರಣ, ಮಳೆಯ ನೀರು ಸಂಗ್ರಹಣೆ ಹೊಂಡಗಳ ಸ್ಥಾಪನೆ.
ಮಳೆಯ ನೀರಿನ ಚರಂಡಿಗಳು
19-10-2025ಮಳೆಯ ನೀರಿನ ಚರಂಡಿಗಳ ನಿರ್ವಹಣೆ, ಜಾಲರಿ ಕವರ್ಗಳನ್ನು ಅಳವಡಿಸಿ ತ್ಯಾಜ್ಯವನ್ನು ತಡೆಹಿಡಿಯುವುದು.
ಸರ್ಕಾರದ ಯೋಜನೆಗಳು
19-10-2025ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಹಕ್ಕುಗಳನ್ನು ಪಡೆಯಲು “ಜನಮಿತ್ರ” ಶಿಬಿರಗಳ ಆಯೋಜನೆ.
ಮನರಂಜನೆ ಮತ್ತು ಕ್ರಿಡೆ
19-10-2025ಪ್ರಮುಖ ಕ್ರೀಡಾ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಕೇಂದ್ರಗಳ ಸ್ಥಾಪನೆ, ಹಿರಿಯರಿಗೆ ವಿಶೇಷ ಸೌಲಭ್ಯ.
ಉದ್ಯಾನವನಗಳು ಮತ್ತು ಆಟದ ಮೈದಾನಗಳು
19-10-2025ಉದ್ಯಾನವನಗಳು ಮತ್ತು ಆಟದ ಮೈದಾನಗಳ ನಿರ್ವಹಣೆಯನ್ನು ಬಿಬಿಎಂಪಿ ಹೊಣೆಗಾರಿಕೆ. ವಿಶೇಷ ಅಗತ್ಯವಿರುವ ಮಕ್ಕಳಿಗೆ ಅನುಕೂಲತೆ ಒದಗಿಸಲಾಗುವುದು.
ಮರಗಳು ಮತ್ತು ಹಸಿರೀಕರಣ
19-10-2025ಮರಗಳ ಗಣತಿ, ಕೊಂಬೆ ಕತ್ತರಿಕೆ, ಹೊಸ ಸಸಿ ನೆಡುವುದು, ಮರಗಳಿಂದ ಮೊಳೆಗಳನ್ನು/ಬೋರ್ಡ್ಗಳನ್ನು ತೆಗೆದುಹಾಕುವುದು ಮತ್ತು ಎಲೆಕಸ ನಿಯಮಿತ ತೆರವು.
ಬಿಬಿಎಂಪಿ ಶಾಲೆಗಳು
19-10-2025ಶಾಲೆಗಳ ಮೂಲಸೌಕರ್ಯ ನವೀಕರಣ, ಶಿಕ್ಷಕರಿಗೆ ವೇತನ ಖಚಿತಪಡಿಸುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಯೂನಿಫಾರ್ಮ್ ಒದಗಿಸುವುದು.
ಪೌರಕಾರ್ಮಿಕರ ಕಲ್ಯಾಣ
19-10-2025ಬಿಬಿಎಂಪಿಯಿಂದ ನೇರ ಉದ್ಯೋಗ, ವಾರಕ್ಕೊಂದು ರಜೆ, ಸುರಕ್ಷತಾ ಸಾಧನಗಳು, ಕುಡಿಯುವ ನೀರು, ಶೌಚಾಲಯ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು.
ಬೀದಿ ದೀಪ ಮತ್ತು ಸಿಸಿಟಿವಿ
19-10-2025ಬೀದಿ ದೀಪಗಳ ನಿರ್ವಹಣೆ, ಹಾನಿಗೊಳಗಾದ ದೀಪಗಳನ್ನು ಬದಲಾಯಿಸುವುದು ಹಾಗೂ ಅಸುರಕ್ಷಿತ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಸ್ಥಾಪನೆ.
ಘನತ್ಯಾಜ್ಯ ನಿರ್ವಹಣೆ (SWM)
19-10-2025ಒಣ-ತ್ಯಾಜ್ಯ ಸಂಗ್ರಹ ಕೇಂದ್ರ (DWCC) ಸ್ಥಾಪನೆ/ನವೀಕರಣ, ತ್ಯಾಜ್ಯ ಸಂಗ್ರಹಣೆ GPS ಲಿಂಕ್ ಮಾಡುವುದು ಮತ್ತು ಕಪ್ಪು ಚುಕ್ಕೆ ಸ್ಥಳಗಳನ್ನು ತೆರವುಗೊಳಿಸುವುದು
ತಡೆಗಟ್ಟುವ ಆರೋಗ್ಯ ಸೇವೆ
19-10-2025“ನಿಮ್ಮ ಆರೋಗ್ಯ” ಶಿಬಿರಗಳ ಮೂಲಕ ಪ್ರಾಥಮಿಕ ಆರೋಗ್ಯ ತಪಾಸಣೆ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು.