ಬೆಂಗಳೂರಿನ ನವನಿರ್ಮಾಣ ಪಕ್ಷವು ನಮ್ಮಬಿಎನ್‌ಪಿ.ಓಆರ್‌ಜಿ ಎಂಬ ಜಾಲತಾಣವನ್ನು ನಿರ್ವಹಿಸುತ್ತದೆ, ಇದು ಈ ಸೇವೆಯನ್ನು ಒದಗಿಸುತ್ತದೆ.

ಈ ಗೌಪ್ಯತಾ ಪ್ರಕಟಣೆ, ಈ ಜಾಲತಾಣವು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ಕುರಿತು ಮತ್ತು ಆ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು ಮಾಹಿತಿ ನೀಡುತ್ತದೆ.

ನೀವು ನಮ್ಮ ಸೇವೆಯನ್ನು ಬಳಸಲು ಆಯ್ಕೆ ಮಾಡಿದರೆ, ಈ ನೀತಿಗೆ ಅನುಸಾರವಾಗಿ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಬಳಸುವುದು ಒಪ್ಪಿಕೊಂಡಂತಾಗುತ್ತದೆ. ನಾವು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ಸೇವೆಯನ್ನು ಒದಗಿಸಲು ಮತ್ತು ಸುಧಾರಿಸಲು ಮಾತ್ರ ಬಳಸಲಾಗುತ್ತದೆ. ಈ ಗೌಪ್ಯತಾ ನೀತಿಯಲ್ಲಿ ವಿವರಿಸಿದ ರೀತಿಯ ಹೊರತಾಗಿ, ನಾವು ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.

ಈ ಗೌಪ್ಯತಾ ನೀತಿಯಲ್ಲಿ ಬಳಸಿರುವ ಪದಗಳು ನಮ್ಮ ನಿಬಂಧನೆಗಳು ಮತ್ತು ಷರತ್ತುಗಳು ವಿಭಾಗದಲ್ಲಿ ಇರುವ ಅರ್ಥಗಳಂತೆಯೇ ಇರುತ್ತವೆ, ಅದು ನಮ್ಮಬಿಎನ್‌ಪಿ.ಓಆರ್‌ಜಿ ನಲ್ಲಿ ಲಭ್ಯವಿದೆ, ಬೇರೆ ರೀತಿಯಾಗಿ ವ್ಯಾಖ್ಯಾನಿಸಲ್ಪಟ್ಟಿಲ್ಲದಿದ್ದರೆ.

ಮಾಹಿತಿ ಸಂಗ್ರಹಣೆ ಮತ್ತು ಬಳಕೆ

ನಮ್ಮ ಸೇವೆಯನ್ನು ಉತ್ತಮ ಅನುಭವದೊಂದಿಗೆ ಬಳಸಲು, ನಾವು ನಿಮ್ಮಿಂದ ಕೆಲವು ವೈಯಕ್ತಿಕ ವಿವರಗಳನ್ನು ಕೇಳಬಹುದು  ಉದಾಹರಣೆಗೆ: ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ಇಮೇಲ್ ಗುರುತು ಮತ್ತು ಅಂಚೆ ವಿಳಾಸ. ಈ ಮಾಹಿತಿಯನ್ನು ನಿಮ್ಮನ್ನು ಸಂಪರ್ಕಿಸಲು ಅಥವಾ ಗುರುತಿಸಲು ಬಳಸಲಾಗುತ್ತದೆ.

ವೈಯಕ್ತಿಕ ಮಾಹಿತಿಯ ಸಂಗ್ರಹಣೆ

ಈ ಜಾಲತಾಣವು ಕೆಳಗಿನ ರೀತಿಯ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಬಳಸಬಹುದು:

•ಈ ಜಾಲತಾಣದ ಬಳಕೆಯ ಕುರಿತು ಮಾಹಿತಿ (ಉದಾಹರಣೆಗೆ ಸಂಚರಣೆ ಮಾದರಿ ಮತ್ತು ವರ್ತನೆ).

•ಜಾಲತಾಣದಲ್ಲಿ ನೋಂದಣಿ ಮಾಡುವ ವೇಳೆ ನೀಡಿದ ಸಂಪರ್ಕ ವಿವರಗಳು.

•ಜಾಲತಾಣದ ಮೂಲಕ ನಡೆದ ವ್ಯವಹಾರಗಳ ಮಾಹಿತಿ.

•ಜಾಲತಾಣದ ಸೇವೆಗಳ ಚಂದಾದಾರಿಕೆಗೆ ನೀಡಿದ ಮಾಹಿತಿ (ಸಂದೇಶ ಮತ್ತು ಇಮೇಲ್ ಎಚ್ಚರಿಕೆಗಳನ್ನು ಒಳಗೊಂಡಂತೆ) ಮತ್ತು ನೀವು ಇತರ ಬಳಕೆದಾರರಿಗೆ ಅಥವಾ ನಿರ್ವಹಕರಿಗೆ ಕಳುಹಿಸಿದ ಯಾವುದೇ ಮಾಹಿತಿ.

ದಾಖಲೆ ಮಾಹಿತಿ (ಲಾಗ್ ಡೇಟಾ)

ನೀವು ನಮ್ಮ ಸೇವೆಗೆ ಭೇಟಿ ನೀಡುವಾಗ, ನಿಮ್ಮ ಸಂಚಾರಿ ಸಾಧನದಿಂದ ಬರುತ್ತಿರುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಇದನ್ನು ದಾಖಲೆ ಮಾಹಿತಿ ಎಂದು ಕರೆಯಲಾಗುತ್ತದೆ. ಈ ದಾಖಲೆ ಮಾಹಿತಿಯಲ್ಲಿ ನಿಮ್ಮ ಗಣಕಯಂತ್ರದ ಇಂಟರ್ನೆಟ್ ವಿಳಾಸ (ಐಪಿ ವಿಳಾಸ), ಬ್ರೌಸರ್ ಆವೃತ್ತಿ, ನೀವು ಭೇಟಿ ನೀಡಿದ ಪುಟಗಳು, ಭೇಟಿಯ ದಿನಾಂಕ ಮತ್ತು ಸಮಯ, ಆ ಪುಟಗಳಲ್ಲಿ ಕಳೆಯುವ ಸಮಯ ಮತ್ತು ಇತರ ಅಂಕಿಅಂಶಗಳು ಇರಬಹುದು.

ಕುಕಿಗಳು

ಕುಕಿಗಳು ಎಂಬವು ಅತಿ ಚಿಕ್ಕ ಪ್ರಮಾಣದ ದತ್ತಾಂಶವನ್ನು ಒಳಗೊಂಡಿರುವ ಕಡತಗಳು. ಅವು ಸಾಮಾನ್ಯವಾಗಿ ಅನಾಮಧೇಯ ವಿಶಿಷ್ಟ ಗುರುತುಗಳಾಗಿರುತ್ತವೆ. ನೀವು ಭೇಟಿ ನೀಡುವ ಜಾಲತಾಣದಿಂದ ನಿಮ್ಮ ಬ್ರೌಸರ್‌ಗೆ ಕಳುಹಿಸಲ್ಪಟ್ಟು, ನಿಮ್ಮ ಗಣಕಯಂತ್ರದಲ್ಲಿ ಸಂಗ್ರಹಿಸಲಾಗುತ್ತದೆ.

ನಮ್ಮ ಜಾಲತಾಣವು ಈ ಕುಕಿಗಳನ್ನು ಮಾಹಿತಿ ಸಂಗ್ರಹಿಸಲು ಮತ್ತು ಸೇವೆಯನ್ನು ಸುಧಾರಿಸಲು ಬಳಸುತ್ತದೆ. ನೀವು ಕುಕಿಗಳನ್ನು ಸ್ವೀಕರಿಸುವುದೇ ಅಥವಾ ನಿರಾಕರಿಸುವುದೇ ಎಂದು ಆಯ್ಕೆ ಮಾಡಬಹುದು, ಮತ್ತು ಕುಕಿ ಕಳುಹಿಸಲ್ಪಡುವಾಗ ತಿಳಿಯಬಹುದು. ಆದರೆ ನೀವು ಕುಕಿಗಳನ್ನು ನಿರಾಕರಿಸಿದರೆ, ನಮ್ಮ ಸೇವೆಯ ಕೆಲವು ಭಾಗಗಳನ್ನು ಬಳಸಲು ಸಾಧ್ಯವಾಗದೇ ಇರಬಹುದು.

ಸೇವಾ ಪೂರೈಕೆದಾರರು

ನಾವು ಕೆಳಗಿನ ಕಾರಣಗಳಿಗಾಗಿ ತೃತೀಯ ಪಕ್ಷದ ಸಂಸ್ಥೆಗಳು ಅಥವಾ ವ್ಯಕ್ತಿಗಳನ್ನು ನೇಮಿಸಬಹುದು:

•ನಮ್ಮ ಸೇವೆಯನ್ನು ಸುಗಮಗೊಳಿಸಲು,

•ನಮ್ಮ ಪರವಾಗಿ ಸೇವೆಯನ್ನು ಒದಗಿಸಲು,

•ಸೇವೆಗೆ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲು, ಅಥವಾ

•ನಮ್ಮ ಸೇವೆಯ ಬಳಕೆಯ ವಿಶ್ಲೇಷಣೆಗೆ ಸಹಾಯ ಮಾಡಲು.

ಈ ತೃತೀಯ ಪಕ್ಷಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಗೆ ಪ್ರವೇಶವಿರಬಹುದು, ಆದರೆ ಅವರು ಈ ಮಾಹಿತಿಯನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಹಿರಂಗಪಡಿಸುವುದು ಅಥವಾ ಬಳಸುವುದು ನಿಷೇಧಿತವಾಗಿದೆ.

ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿರುವ ವಿಶ್ವಾಸವನ್ನು ಗೌರವಿಸುತ್ತೇವೆ. ಅದಕ್ಕಾಗಿ ವ್ಯಾಪಾರಿಕವಾಗಿ ಮಾನ್ಯವಾದ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ಇಂಟರ್ನೆಟ್ ಮೂಲಕದ ಪ್ರಸರಣ ಅಥವಾ ಎಲೆಕ್ಟ್ರಾನಿಕ್ ಸಂಗ್ರಹಣೆಯ ಯಾವುದೇ ವಿಧಾನವೂ 100% ಭದ್ರವಲ್ಲ. ಆದ್ದರಿಂದ ಸಂಪೂರ್ಣ ಭದ್ರತೆಯನ್ನು ನಾವು ಖಾತರಿಪಡಿಸಲು ಸಾಧ್ಯವಿಲ್ಲ.

ಇತರ ಜಾಲತಾಣಗಳ ಸಂಪರ್ಕಗಳು

ನಮ್ಮ ಸೇವೆಯಲ್ಲಿ ಇತರ ಜಾಲತಾಣಗಳ ಸಂಪರ್ಕಗಳು ಇರಬಹುದು. ನೀವು ತೃತೀಯ ಪಕ್ಷದ ಸಂಪರ್ಕವನ್ನು ಕ್ಲಿಕ್ ಮಾಡಿದರೆ, ನೀವು ಆ ಜಾಲತಾಣಕ್ಕೆ ತೆರಳುತ್ತೀರಿ. ಈ ಬಾಹ್ಯ ಜಾಲತಾಣಗಳು ನಮ್ಮಿಂದ ನಿರ್ವಹಿಸಲ್ಪಡುವುದಿಲ್ಲ. ಆದ್ದರಿಂದ, ನೀವು ಆ ಜಾಲತಾಣಗಳ ಗೌಪ್ಯತಾ ನೀತಿಯನ್ನು ಪರಿಶೀಲಿಸಲು ನಾವು ಶಿಫಾರಸು ಮಾಡುತ್ತೇವೆ. ನಾವು ಅವರ ವಿಷಯ, ಗೌಪ್ಯತಾ ನೀತಿ ಅಥವಾ ಅವರ ಅಭ್ಯಾಸಗಳ ಬಗ್ಗೆ ಯಾವುದೇ ಜವಾಬ್ದಾರಿಯನ್ನು ಹೊಲುವುದಿಲ್ಲ.

ಮಕ್ಕಳ ಗೌಪ್ಯತೆ

ನಮ್ಮ ಸೇವೆಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ ಉದ್ದೇಶಿತವಾಗಿಲ್ಲ. ನಾವು 18 ವರ್ಷದೊಳಗಿನ ಮಕ್ಕಳಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. 18 ವರ್ಷದೊಳಗಿನ ಮಗು ವೈಯಕ್ತಿಕ ಮಾಹಿತಿಯನ್ನು ನೀಡಿದರೆ, ನಾವು ಅದನ್ನು ತಕ್ಷಣವೇ ನಮ್ಮ ಸರ್ವರ್‌ಗಳಿಂದ ಅಳಿಸುತ್ತೇವೆ. ನೀವು ಪೋಷಕರಾಗಿದ್ದರೆ ಅಥವಾ ಪಾಲಕರಾಗಿದ್ದರೆ ಮತ್ತು ನಿಮ್ಮ ಮಗುವು ಮಾಹಿತಿ ನೀಡಿರುವುದು ನಿಮಗೆ ತಿಳಿದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ  ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

ಕಾನೂನಾತ್ಮಕ ಬಹಿರಂಗಪಡಣೆ

ಕಾನೂನು ಪ್ರಕಾರ ಅಗತ್ಯವಿದ್ದರೆ, ಯಾವುದೇ ಕಾನೂನು ಕ್ರಮ ಅಥವಾ ಪ್ರಸ್ತಾವಿತ ಕಾನೂನು ಕ್ರಮದ ಹಿನ್ನೆಲೆಯಲ್ಲಿ, ಅಥವಾ ನಮ್ಮ ಕಾನೂನು ಹಕ್ಕುಗಳನ್ನು ಸ್ಥಾಪಿಸಲು, ಅಭ್ಯಾಸ ಮಾಡಲು ಅಥವಾ ರಕ್ಷಿಸಲು ಅಗತ್ಯವಿದ್ದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬಹುದು.

ಈ ಗೌಪ್ಯತಾ ನೀತಿಯಲ್ಲಿ ಬದಲಾವಣೆಗಳು

ನಾವು ಈ ಗೌಪ್ಯತಾ ನೀತಿಯನ್ನು ಸಮಯ ಸಮಯಕ್ಕೆ ನವೀಕರಿಸಬಹುದು. ಆದ್ದರಿಂದ, ನೀವು ಈ ಪುಟವನ್ನು ಸಮಯಾವಕಾಶಗಳಲ್ಲಿ ಪರಿಶೀಲಿಸಲು ಸಲಹೆ ನೀಡಲಾಗುತ್ತದೆ. ಯಾವುದೇ ಬದಲಾವಣೆಗಳನ್ನು ಈ ಪುಟದಲ್ಲಿ ಪ್ರಕಟಿಸಿದ ತಕ್ಷಣದಿಂದಲೇ ಅವು ಪರಿಣಾಮಕಾರಿಯಾಗುತ್ತವೆ.

ನಮ್ಮನ್ನು ಸಂಪರ್ಕಿಸಿ

ನಮ್ಮ ಗೌಪ್ಯತಾ ನೀತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳು ಇದ್ದರೆ, ದಯವಿಟ್ಟು ನಮ್ಮನ್ನು ಈ ವಿಳಾಸದಲ್ಲಿ ಸಂಪರ್ಕಿಸಿ:

📧 Do not hesitate to contact us at info@nammabnp.org

ಟೀಮ್ ಬಿಎನ್ಪಿ ಸೇರಿ!

ಬೆಂಗಳೂರು ನಗರಕ್ಕೆ ಮಾತ್ರ ಕೇಂದ್ರೀಕೃತವಾದ ಏಕೈಕ ಪಕ್ಷದ ಭಾಗವಾಗಿರಿ.
ಇಂದೇ ಸೇರ್ಪಡೆಯಾಗಿ, ನಮ್ಮ ನಗರದ ನಿರ್ಮಾಣವನ್ನು ಒಟ್ಟಿಗೆ ಮಾಡೋಣ.

ಟೀಮ್ ಬಿಎನ್ಪಿ ಸೇರಿ!