
ವಾರ್ಡ್ ಘೋಷಣಾಪತ್ರ – ಉತ್ತಮ ಆಡಳಿತ ಇಲ್ಲಿ ಆರಂಭವಾಗುತ್ತದೆ
ವಾರ್ಡ್ ಘೋಷಣಾಪತ್ರ
ರಸ್ತೆ ಮತ್ತು ಫುಟ್‌ಪಾತ್‌ಗಳು
ಒಂದು ವರ್ಷದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುವುದು ಮತ್ತು ಹಾಳಾದ ಫುಟ್‌ಪಾತ್‌ಗಳನ್ನು ಸರಿಪಡಿಸಲಾಗುವುದು. ನಿರಂತರ ನಿರ್ವಹಣೆಯೊಂದಿಗೆ ಮಾನದಂಡ ಪಾಲನೆ ಖಚಿತಪಡಿಸಲಾಗುವುದು.
ಬಿಡಿಎ ಲೇಔಟ್‌ಗಳು
ಬಡಾವಣೆ ಹಸ್ತಾಂತರವಾದ ನಂತರ ಅವುಗಳ ನಿರ್ವಹಣೆ ಬಿಬಿಎಂಪಿಯಿಂದ ಕೈಗೊಳ್ಳಲಾಗುವುದು.
ಕಾಮಗಾರಿ ಪ್ರಾರಂಭ
ಯಾವುದೇ ಕಾಮಗಾರಿಯನ್ನು ಆರಂಭಿಸುವ ಮೊದಲು ವಾರ್ಡ್ ಸಮಿತಿ ಮತ್ತು ಪ್ರದೇಶ ಸಭೆಗಳೊಂದಿಗೆ ಸಮಾಲೋಚನೆ ನಡೆಸಿ ಅನುಮೋದನೆ ಪಡೆಯಲಾಗುವುದು.
ಮೇಲ್ವಿಚಾರಣೆ
ಯೋಜನೆಯ ಪ್ರಗತಿ, ಗುಣಮಟ್ಟ ಹಾಗೂ ಗುತ್ತಿಗೆದಾರರ ವಿವರಗಳನ್ನು ವಾರ್ಡ್ ಸಮಿತಿ ಸಭೆಗಳಲ್ಲಿ ಚರ್ಚಿಸಿ, ವಾರ್ಡ್ ಕಚೇರಿಯಲ್ಲಿ ಪ್ರದರ್ಶಿಸಲಾಗುವುದು.
ವಾರ್ಡ್ ವೆಬ್‌ಸೈಟ್
ಎಲ್ಲಾ ಅನುಮೋದಿತ ಯೋಜನೆಗಳು ಹಾಗೂ ಟೆಂಡರ್ ವಿವರಗಳನ್ನು ವಾರ್ಡ್ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಡೊಮೇನ್‌ನಲ್ಲಿ ಪ್ರಕಟಿಸಲಾಗುವುದು.
ಯೋಜನೆ ಅನುಮೋದನೆ
ಬಿ ಎನ್ ಪಿ ಕಾರ್ಪೊರೇಟರ್‌ಗಳು ಬಿಬಿಎಂಪಿ ಕೌನ್ಸಿಲ್‌ನಲ್ಲಿ ವಾರ್ಡ್ ಸಮಿತಿ ಹಾಗೂ ಪ್ರದೇಶ ಸಭೆಗಳು ಅಂತಿಮಗೊಳಿಸಿದ ಯೋಜನೆಗಳಿಗೇ ಒತ್ತಾಯಿಸುತ್ತಾರೆ.
ಯೋಜನೆ ಅಂತಿಮಗೊಳಿಸುವಿಕೆ
ವಾರ್ಡ್ ಸಮಿತಿ ಪ್ರಾಥಮ್ಯ ನಿಗದಿ ಮಾಡಿ, ಅನುಮೋದನೆಗೆ ಅಗತ್ಯ ಯೋಜನೆಗಳನ್ನು ಅಂತಿಮಗೊಳಿಸುತ್ತದೆ.
ಯೋಜನೆ ಗುರುತಿಸುವಿಕೆ
ಪ್ರದೇಶ ಸಭೆಗಳು ತಮ್ಮ ಪ್ರದೇಶದ ಪ್ರಮುಖ ಯೋಜನೆಗಳನ್ನು ಗುರುತಿಸುತ್ತವೆ.
ವಾರ್ಡ್ ಸಮಿತಿ
ಪ್ರತೀ ಕ್ಷೇತ್ರದ ಕಾರ್ಪೊರೇಟರ್ ಮತ್ತು ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ 11 ಸದಸ್ಯರ ವಾರ್ಡ್ ಸಮಿತಿ ರಚನೆ. ತಿಂಗಳಿಗೆ ಕನಿಷ್ಠ ಎರಡು ಸಭೆಗಳು.
ಪ್ರದೇಶ ಸಭೆಗಳು
ಪ್ರತೀ ವಾರ್ಡ್‌ನ ಕನಿಷ್ಠ 10 ಗುರುತಿಸಲಾದ ಪ್ರದೇಶಗಳಲ್ಲಿ, 5-10 ಸಕ್ರಿಯ ನಾಗರಿಕರೊಂದಿಗೆ ಪ್ರದೇಶ ಸಭೆಗಳನ್ನು ಸ್ಥಾಪಿಸಲಾಗುವುದು.