ಬೆನಪದ ಅಗತ್ಯತೆ ಬೆನಪ?
ಬೆನಪ (ಬೆಂಗಳೂರು ನವನಿರ್ಮಾಣ ಪಕ್ಷ) ಬೆಂಗಳೂರು ನಗರವನ್ನು ಮರುನಿರ್ಮಿಸುವ ಗುರಿಯನ್ನು ಹೊಂದಿದೆ.
ಬೆನಪ, ಬೆಂಗಳೂರು ನಗರದ ಸಾಧಾರಣ ನಾಗರಿಕರಿಗೆ ಧ್ವನಿಯನ್ನು ನೀಡುವ ಸಲುವಾಗಿ ರೂಪಿಸಿರುವ ಒಂದು ರಾಜಕೀಯ ವೇದಿಕೆಯಾಗಿದೆ. ಇದು ಬೆಂಗಳೂರಿನ ಜನರ, ಜನರಿಂದ ಹಾಗು ಜನರಿಗಾಗಿ ಇರುವ ಒಂದು ಪಕ್ಷ. ಇದು ವಿಶ್ವದ ಮೊದಲ ನಗರ ಕೇಂದ್ರಿತ ಪಕ್ಷವಾಗಿದ್ದು ಕೇವಲ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಚುಣಾವಣೆಗಳಲ್ಲಿ ಮಾತ್ರ ಭಾಗವಹಿಸುತ್ತದೆ.
ಇದು ಇನ್ಯಾವುದೇ ರಾಜ್ಯ/ರಾಷ್ಟ್ರ ರಾಜಕಾರಣದಲ್ಲಿ ಭಾಗಿಯಾಗುವುದಿಲ್ಲ. ಬೆಂಗಳೂರಿನ ಬದ್ಧ ನಾಗರಿಕ ಕಾರ್ಯಕರ್ತರು, ವಿವಿಧ ಕ್ಷೇತ್ರಗಳ ವೃತ್ತಿಪರರು, ಉದ್ಯಮಿಗಳು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳ ಪ್ರೀತಿ ಹಾಗು ಒಗ್ಗಟ್ಟಿನ ಫಲವಾಗಿ ರೂಪಿತವಾಗಿರುವ ಪಕ್ಷ ನಮ್ಮ ಬೆನಪ. ನಮ್ಮ ಉದ್ದೇಶ ಬೆಂಗಳೂರು ನಗರವನ್ನು ಮರು ನಿರ್ಮಾಣ ಮಾಡಿ ಅದನ್ನು ಅದರ ಪುರಾತನ ವೈಭವಕ್ಕೆ ಮರಳಿಸುವುದಾಗಿದೆ.
ಬೆನಪದ ಅಗತ್ಯತೆ ಬೆನಪ?

ಬೆನಪ ಮಾಹಿತಿ ಆಧಾರಿತ ಪರಿಹಾರಗಳನ್ನು ಒದಗಿಸಬಲ್ಲದು
ಬೆಂಗಳೂರು ನಗರವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದ್ದು ಇದು ಭಾರತದ ಐಟಿ ಹಬ್. ಬೆಂಗಳೂರು ನಗರದಿಂದ ಸಂಗ್ರಹವಾಗುತ್ತಿರುವ ತೆರಿಗೆ ಸರಕಾರದ ಬೊಕ್ಕಸದಲ್ಲಿ ಒಂದು ಅತಿ ದೊಡ್ಡ ಭಾಗವಾಗಿದೆ. ಆದರೂ ನಗರದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳ ಹಾಗು ನಾಗರಿಕ ಸೇವೆಗಳ ಕೊರತೆ ಹೇರಳವಾಗಿ ಕಂಡು ಬರುತ್ತಿದ್ದು ಈ ಸಮಸ್ಯೆಗಳಿಗೆ ಬೆನಪ ಮಾಹಿತಿ ಆಧಾರಿತ ಪರಿಹಾರಗಳನ್ನು ನೀಡಲು ಮುಂದೆ ಬರುತ್ತಿದೆ.

ಪಾರದರ್ಶಕತೆ, ಉತ್ತರದಾಯಿತ್ವ ಹಾಗು ಇಚ್ಛಾಶಕ್ತಿಯನ್ನು ಕಳೆದುಕೊಂಡಿರುವ ಬಿಬಿಎಂಪಿ
ಬೆಂಗಳೂರು ನಗರದ ಆಡಳಿತ ನಡೆಸುತ್ತಿರುವ ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ರಾಜಕೀಯ ಇಚ್ಛಾಶಕ್ತಿಯ ಕೊರತೆ, ಬೆಂಗಳೂರಿನ ನಾಗರೀಕರ ಬಗ್ಗೆ ನಿರಾಸಕ್ತಿ, ಅಪಾರದರ್ಶಕತೆ, ಹಾಗು ಉತ್ತರದಾಯಿತ್ವದ ಕೊರತೆಯಿಂದಾಗಿ ಈ ಮೇಲಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ.

ಬೆನಪ ವು ನಾಗರಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಪ್ರತಿಪಾದಿಸುತ್ತದೆ
ಸ್ಥಳೀಯ ಆಡಳಿತವು ಸುಸೂತ್ರವಾಗಿ ಕಾರ್ಯನಿರ್ವಹಿಸಲು ನಾಗರಿಕರ ಸಹಕಾರ ಹಾಗು ಸಹಭಾಗಿತ್ವ ಅತ್ಯಗತ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ದುರಾದೃಷ್ಟವಶಾತ್ ಈ ವಿಷಯದ ಬಗ್ಗೆ ಸ್ಥಳೀಯ ಆಡಳಿತ ಹಾಗು ನಾಗರಿಕರು ಜಾಗೃತರಾಗಿಲ್ಲ.

ನಿಧಿಯ ಅತಿರೇಕದ ದುರುಪಯೋಗ ನಿಲ್ಲಬೇಕು
ದುರದೃಷ್ಟವಶಾತ್ ಬೆಂಗಳೂರು ನಗರವನ್ನು ರಾಜಕೀಯ ಅಥವಾ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವ ಅಕ್ಷಯಪಾತ್ರೆ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಕೋಟ್ಯಾಂತರ ರೂಪಾಯಿಗಳನ್ನು ವಿವಿಧ ತೆರಿಗೆಗಳು, ಶುಲ್ಕಗಳು ಮತ್ತು ಟೋಲ್ ಗಳ ರೂಪದಲ್ಲಿ ನಾಗರಿಕರಿಂದ ಸಂಗ್ರಹಿಸಲಾಗುತ್ತಿದೆ. ಆದರೆ ವಾಸ್ತವವಾಗಿ ನಗರದ ರಚನಾತ್ಮಕ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಹಣವು ಒಟ್ಟಾಗಿರುವ ಹಣದ ಎದುರು ನಗಣ್ಯವಾಗಿದೆ. ನಗರವು ಬಿಬಿಎಂಪಿಗೆ ಭಾರಿ ಆದಾಯವನ್ನು ತಂದುಕೊಡುತ್ತಿದ್ದು ಅದರಲ್ಲಿ ಸಣ್ಣ ಭಾಗವನ್ಉ ಮಾತ್ರವೇ ನಗರವನ್ನು ನಿರ್ವಹಿಸಲು ಮತ್ತು ಸುಧಾರಿಸಲು ಖರ್ಚು ಮಾಡಲಾಗುತ್ತಿದೆ.
ದ ವಿಶಿಷ್ಟತೆ ಬೆನಪ?
- ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿ ನಿಲ್ಲುವ, ಬೆನಪ, ಬೆಂಗಳೂರು ನಗರದ ಮೇಲೆ ಮಾತ್ರ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಹೀಗಾಗಿ, ಅದು ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಕೇವಲ ಬಿಬಿಎಂಪಿ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲಿದೆ
- ಬೆನಪ ಯಾವುದೇ ರಾಜಕೀಯ ಉದ್ದೇಶ ಅಥವಾ ಬಾಧ್ಯತೆಗಳನ್ನು ಹೊಂದಿರದೇ ಯಾವುದೇ ರಾಜ್ಯ ಅಥವಾ ರಾಷ್ಟ್ರೀಯ ಪಕ್ಷಕ್ಕೆ ನಿಷ್ಠವಾಗಿಲ್ಲ. ಬೆನಪ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ನಿಷ್ಠವಾಗಿರುತ್ತದೆ.
- ಬೆನಪ ವಾರ್ಡ್ಗಳ ತಳಮಟ್ಟದ ಆಡಳಿತದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ನಾಗರಿಕರ ಪಾಲ್ಗೊಳ್ಳುವಿಕೆ ಹಾಗು ನಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಬೆನಪ ದ ಪ್ರಮುಖ ಲಕ್ಷಣ.
- ಮಾಹಿತಿಯನ್ನು ನೀಡುತ್ತಾ ಸಮತೋಲಿತವಾಗಿ ಪೂರ್ವಭಾವಿಯಾಗಿ ಸಮಸ್ಯೆಗಳಿಗೆ ಪರಿಹಾರ ನೀಡುವ ಮೇಲೆ ಗಮನ ಹರಿಸುವುದು.
- ಪ್ರತಿ ವಾರ್ಡ್ ಒಳಗೆ ಸೂಕ್ತ ರೀತಿಯಲ್ಲಿ ಬಜೆಟ್ ಹಂಚಿಕೆ ಮಾಡಲು ಉತ್ತಮ ಯೋಜನೆಯೊಂದಿಗೆ ವಾರ್ಡ್-ಮ್ಯಾಪಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ.
- ಕಾರ್ಪೊರೇಟರ್ ಅಭ್ಯರ್ಥಿಗಳನ್ನು ಪ್ರತಿ ವಾರ್ಡ್ ಗೆ ಈಗಾಗಲೇ ಜಾರಿಯಲ್ಲಿರುವ ನಾಗರಿಕ ಕಾರ್ಪೊರೇಟರ್ ತಂಡಗಳು ಆಯ್ಕೆ ಮಾಡುತ್ತವೆ. ಅರ್ಹತೆ ಮತ್ತು ಹಿಂದಿನ ಸಾಧನೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಪ್ರತಿಯೊಂದು ಚಟುವಟಿಕೆಯಲ್ಲೂ ಉತ್ತರದಾಯಿತ್ವ ಹಾಗು ಪಾರದರ್ಶಕತೆಯನ್ನು ಬೆನಪ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ.
- ಲಿಂಗ, ಧರ್ಮ, ಜಾತಿ, ವರ್ಗ ಅಥವಾ ಮತದ ಆಧಾರದ ಮೇಲೆ ಯಾವುದೇ. ರೀತಿಯ ತಾರತಮ್ಯ ಬೇನಪ ದಲ್ಲಿ ಇರುವುದಿಲ್ಲ.
ತಂಡ ಬೆನಪ

























ವಾಟ್ ಡೆಫಿನೇಸ್ ಬೆನಪ?

ಬೆನಪದ ಧ್ಯೇಯ
Make Bengaluru a Model City as envisioned by Bengaluru’s founder, Nadaprabhu Kempe Gowda!

ಬೆನಪದ ಸಿದ್ಧಾಂತಗಳು
ಒಂದು ಉತ್ತಮ ಆಡಳಿತವು-
–ತಳಮಟ್ಟದಿಂದ ನಿರ್ವಹಿಸಲ್ಪಡಬೇಕು
– ಪಾರದರ್ಶಕ ಹಾಗು ಉತ್ತರದಾಯಿ ಆಗಿರಬೇಕು
ಜನರ, ಜನರಿಂದ ಹಾಗು ಜನರಿಗಾಗಿ ಆಡಳಿತ ನಡೆಯಬೇಕು
ಸಂಪೂರ್ಣ ಮಾಹಿತಿಯನ್ನು ಹೊಂದಿ ಸಮತೋಲಿತ ರೀತಿಯಲ್ಲಿ ಸಮಸ್ಯೆಗಳಳಿಗೆ ಪರಿಹಾರ ಕಂಡುಕೊಳ್ಳುವುದು

ಬೆನಪದ ತತ್ವಗಳು
ಬೆನಪ ಕೇವಲ ಬೆಂಗಳೂರು ನಗರ (ಬಿಬಿಎಂಪಿ) ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಸ್ಪರ್ಧಿಸುತ್ತದೆ.
ಸಕಾರಾತ್ಮಕ ಬದಲಾವಣೆಯನ್ನು ಜಾರಿಗೆ ತರಲು ಬದ್ಧರಾಗಿರುವ ಉತ್ಸುಕ ಸದಸ್ಯರನ್ನು ಸೇರಿಸಿಕೊಳ್ಳುವುದು.
ಬಿಬಿಎಂಪಿ ಚುನಾವಣೆಗೆ ವಿಶ್ವಾಸಾರ್ಹ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು
ಲಿಂಗ, ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವುದೇ ತಾರತಮ್ಯ ಇಲ್ಲದೇ ಪಕ್ಷದೊಳಗೆ ಪ್ರಜಾಪ್ರಭುತ್ವವನ್ನು ಖಚಿತಪಡಿಸಿಕೊಳ್ಳುವುದು.