ಕಾರ್ಯಕ್ರಮ ಆರಂಭ ದಿನಾಂಕ

2020
ಕಾರ್ಯಕ್ರಮದ ಪರಿಣಾಮ

ಲೆಕ್ಕ ಬೇಕು ಉಪಕ್ರಮವಾಗಿ ಪ್ರಾರಂಭವಾದ ಬಿ.ಎನ್.ಪಿ, 5,000+ ಆರ್‌ಟಿಐಗಳನ್ನು ಸಲ್ಲಿಸಿ ಬಿಬಿಎಂಪಿ ಆಡಿಟ್ ಮಾಡಿದ ಲೆಕ್ಕಪತ್ರಗಳನ್ನು ಪ್ರಕಟಿಸಲು ಒತ್ತಾಯಿಸಿತು.ಇದರ ಮುಂದುವರಿದ ಭಾಗವಾಗಿ  ಬೆಂಗಳೂರು ಬೆಂಬಲಿಸಿ 2020 ಚಳುವಳಿ ನಡೆಯಿತು.ಈ ಚಳವಳಿ ನಂತರ BRIGHT ಡಿಜಿಟಲ್ ವೇದಿಕೆಯಾಗಿ ರೂಪಾಂತರಗೊಂಡಿತು – ಇಲ್ಲಿ ನಾಗರಿಕರು ತಮ್ಮ ವಾರ್ಡ್‌ ಬಜೆಟ್‌ಗಳನ್ನು ನೋಡಿ ಖರ್ಚುಗಳನ್ನು ಪಾರದರ್ಶಕವಾಗಿ ಟ್ರ್ಯಾಕ್ ಮಾಡಬಹುದು.ಈಗ ನೂರಾರು ಬೆಂಗಳೂರು ನಿವಾಸಿಗಳು BRIGHT ಬಳಸಿಕೊಂಡು ತಮ್ಮ ವಾರ್ಡ್‌ನ ನಿಧಿಗಳ ಮೇಲೆ ನಿಗಾ ಇಟ್ಟು ಸ್ಥಳೀಯ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ.

ಪರಿಹರಿಸಲಾಗುತ್ತಿರುವ ಸಮಸ್ಯೆ
  • ಬಿಬಿಎಂಪಿ ವಾರ್ಡ್ ಬಜೆಟ್‌ಗಳು ಪಾರದರ್ಶಕವಾಗಿರಲಿಲ್ಲ. ನಾಗರಿಕರಿಗೆ ನಿಧಿ ಹೇಗೆ ಖರ್ಚಾಗಿದೆ ಎಂಬುದನ್ನು ತಿಳಿಯಲು ಅವಕಾಶ ಇರಲಿಲ್ಲ.
  • ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯಿಂದ ಸಾರ್ವಜನಿಕ ಹಣದ ದುರುಪಯೋಗ ಅಥವಾ ಅಲ್ಪ ಉಪಯೋಗ ನಡೆಯುತ್ತಿತ್ತು.
  • ಸಾಮಾನ್ಯ ನಾಗರಿಕರಿಗೆ ಹಣಕಾಸಿನ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಸುಲಭ ಮಾರ್ಗ ಇರಲಿಲ್ಲ.
ಇದು ಹೇಗೆ ಕೆಲಸ ಮಾಡುತ್ತದೆ?

BRIGHT ಅನ್ನು ಪ್ರವೇಶಿಸಿ → ನಿಮ್ಮ ವಾರ್ಡ್‌ನ ಬಜೆಟ್ ಮತ್ತು ಖರ್ಚಿನ ವಿವರಗಳನ್ನು ಆನ್‌ಲೈನ್‌ನಲ್ಲಿ ನೋಡಿ.

ಟೀಮ್ ಬಿಎನ್ಪಿ ಸೇರಿ!

ಬೆಂಗಳೂರು ನಗರಕ್ಕೆ ಮಾತ್ರ ಕೇಂದ್ರೀಕೃತವಾದ ಏಕೈಕ ಪಕ್ಷದ ಭಾಗವಾಗಿರಿ.
ಇಂದೇ ಸೇರ್ಪಡೆಯಾಗಿ, ನಮ್ಮ ನಗರದ ನಿರ್ಮಾಣವನ್ನು ಒಟ್ಟಿಗೆ ಮಾಡೋಣ.

ಟೀಮ್ ಬಿಎನ್ಪಿ ಸೇರಿ!