ಬೆಂಗಳೂರು, ಮಾ 5- ನಗರಕ್ಕೆ ಉತ್ತಮ ಆಡಳಿತ ತರುವ ಉದ್ದೇಶದೊಂದಿಗೆ ಬಿಬಿಎಂಪಿ ಚುನಾವಣೆಗಳಲ್ಲಿ ಎಲ್ಲ 198 ವಾರ್ಡ್ಗಳಲ್ಲಿ ಬೆಂಗಳೂರು ನವ ನಿರ್ಮಾಣ ಪಾರ್ಟಿ(ಬಿಎನ್ಪಿ) ಸ್ಪರ್ಧಿಸಲಿದೆ. ಬೆಂಗಳೂರು ಮತ್ತು ಬಿಬಿಎಂಪಿ ಮೇಲೆ ಪ್ರತ್ಯೇಕವಾಗಿ ಗಮನ ಕೇಂದ್ರೀಕರಿಸಿರುವ ಅನನ್ಯ ರಾಜಕೀಯ ಪಕ್ಷವಾದ ಬೆಂಗಳೂರು ನವ ನಿರ್ಮಾಣ ಪಾರ್ಟಿ(ಬಿಎನ್ಪಿ) ಇದೇ ವರ್ಷ ನಡೆಯಲಿರುವ ಬಿಬಿಎಂಪಿ ಚುನಾವಣೆಗಳಿಗಾಗಿ ತನ್ನ ಪ್ರಣಾಳಿಕೆಯ ಕೆಲವು ಅಂಶಗಳನ್ನು ಪ್ರಕಟಿಸಿದೆ. ಪಕ್ಷದ ಪ್ರಣಾಳಿಕೆಯ ಈ ಅಂಶಗಳು ದೃಢ ತ್ಯಾಜ್ಯ ನಿರ್ವಹಣೆ, ಪೌರಕಾರ್ಮಿಕರು, ಪ್ರಾಣಿಗಳ ಕಲ್ಯಾಣ, ಮಳೆನೀರು ಚರಂಡಿಗಳು, ಸರೋವರಗಳು, ಮರಗಳು, ರಸ್ತೆಗಳು ಮತ್ತು ಅವುಗಳಲ್ಲಿನ ಗುಂಡಿಗಳು ಇತ್ಯಾದಿ ಮೂಲ ಅಂಶಗಳನ್ನು ಆಧರಿಸಿವೆ. ಈ ಪಾರ್ಟಿ ಬಿಬಿಎಂಪಿ ಚುನಾವಣೆಗಳಲ್ಲಿ ಬೆಂಗಳೂರಿನ ಎಲ್ಲಾ 198 ವಾರ್ಡ್ಗಳಲ್ಲಿ ಸ್ಪರ್ಧೆ ನಡೆಸುವ ಯೋಜನೆ ಹೊಂದಿದ್ದು, ಸುಮಾರು 20ಸಂಭಾವ್ಯ ಪಾಲಿಕೆ ಸದಸ್ಯತ್ವದ ಸ್ಪರ್ಧಿಗಳನ್ನು ಈಗಾಗಲೇ ಹೊಂದಿದೆ.