ಬೆನಪದ ಅಗತ್ಯತೆ ಬೆನಪ

  1. ಮುಖಪುಟ
  2. /
  3. Why the need...

ಬೆನಪ ವು ನಾಗರಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಪ್ರತಿಪಾದಿಸುತ್ತದೆ

1993ರಲ್ಲಿ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಗೆ ತಿದ್ದುಪಡಿ ಮಾಡಿ ನಾಗರಿಕರನ್ನು ತಳಮಟ್ಟದ ಆಡಳಿತದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ವಾರ್ಡ್ ಸಮಿತಿಗಳನ್ನು ಕಡ್ಡಾಯಗೊಳಿಸಲಾಯಿತು (we could have a hyperlink on this word which could lead to the BELIEF session on this topic). ಆದರೆ ವಾಸ್ತವದಲ್ಲಿ ಈ ವಾರ್ಡ್ ಸಮಿತಿಗಳಿರುವುದು ಹೆಸರಿಗಾಗಿ ಮಾತ್ರ. ಸಾಧಾರಣವಾಗಿ ಅವುಗಳಲ್ಲಿ ಕಾರ್ಪೊರೇಟರ್ ಗಳ ಅನುಯಾಯಿಗಳು ಅಥವಾ ರಾಜ್ಯ/ರಾಷ್ಟ್ರದ ರಾಜಕೀಯ ಪಕ್ಷಗಳ ನಿಷ್ಠರೇ ಇರುತ್ತಾರೆ. ಪ್ರಸ್ತುತ ಬಿಬಿಎಂಪಿ ಪರಿಷತ್ತು ಹಾಗೂ ಕಾರ್ಪರೇಟರ್ಗಳ ಅನುಪಸ್ಥಿತಿಯಲ್ಲಿ, ಹಲವಾರು ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಲು ತಮಗೆ ಅನುಕೂಲ ಮಾಡಿಕೊಡುವ ವ್ಯಕ್ತಿಗಳನ್ನು ನೇಮಿಸಿದ್ದಾರೆ.

ಈ ಅನೈತಿಕ ವಿಧಾನವನ್ನು ಅನುಸರಿಸುವುದರಿಂದಾಗಿ ನಾಗರಿಕ ಪ್ರಜ್ಞೆ ಹಾಗೂ ಜನರ ಧ್ವನಿಗಳನ್ನು ಹತ್ತಿಕ್ಕಲ್ಪಡುತ್ತಿದೆ. ಇದು ವಾರ್ಡ್ ಸಮಿತಿಯನ್ನು ರಚಿಸಿರುವುದರ ಮೂಲ ಉದ್ದೇಶವನ್ನೇ ತಲೆಕೆಳಗು ಮಾಡಿದೆ.

ಇದನ್ನೇ ಮೂಲಭೂತ ಸಮಸ್ಯೆಯಾಗಿ ಪರಿಗಣಿಸಿರುವ ಬೆನಪ ಈ ಸಮಸ್ಯೆಯನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಿದ್ದು ಜನರಲ್ಲಿ ನಾಗರಿಕ ಪ್ರಜ್ಞೆಯನ್ನು ಪಸರಿಸುವಲ್ಲಿ ಶ್ರಮಿಸುತ್ತಿದೆ ಮತ್ತು ನಾಗರಿಕರು ಸರಕಾರಿ ಪ್ರಕ್ರಿಯೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದೆ.

 

ನಿಮ್ಮ ಅಭಿಪ್ರಾಯ/ಸಲಹೆಗಳು